Normal Theme Yellow on Black Theme Fusia on Black Theme

ಕರ್ನಾಟಕ ಸರ್ಕಾರ

ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ

1) ಲಕ್ಷದೀಪೊತ್ವವ (ಮಕರ ಸಂಕ್ರಾಂತಿ ಬ್ರಹ್ಮೋತ್ವವ ):

ಶ್ರೀರಂಗನಾಥ ಸ್ವಾಮಿಯವರ ದೇವಾಲಯದಲ್ಲಿ ಪ್ರತಿ ಪುಷ್ಯ ಮಾಸದಲ್ಲಿ ಮಕರ ಸಂಕ್ರಾಂತಿ ಬ್ರಹ್ಮೋತ್ಸವದ ಆರನೇ ತಿರುನಾಳ್ರರಂದು ಉತ್ತರಾಯಣ ಪುಣ್ಯಕಾಲದ ಅಂಗವಾಗಿ ದೇವಾಲಯದ ವೈಕುಂಠದ ಬಾಗಿಲನ್ನು ಭಕ್ತಾದಿಗಳಿಗೆ ತೆರೆಯಲಾಗುತ್ತದೆ . ಅಂದು ಬೆಳಿಗ್ಗೆ ಶ್ರೀರಂಗನಾಥ ಸ್ವಾಮಿಯವರಿಗೆ ಪೂರ್ಣವಾಗಿ ಬೆಣ್ಣೆಯಿಂದಲೇ ಅಲಂಕಾರ ಮಾಡಲಾಗುತ್ತದೆ , ರಾತ್ರಿ ಶ್ರೀರಂಗನಾಥ ಸ್ವಾಮಿಯವರಿಗೆ ವೈಕುಂಠಮುಡಿ ಧಾರಣೆ ಮಾಡಿ ಉಭಯ ಅಮ್ಮನವರು ಹಾಗೂ ಸನ್ನಿಧಿ ಅಮ್ಮನವರೋಂದಿಗೆ ಪ್ರಾರಂಭದಲ್ಲಿ ಶ್ರೀರಂಗನಾಥ ಸ್ವಾಮಿಯವರ ಸನ್ನಿಧಿಯ ಸುತ್ತಾಲು ಕತ್ತಲು ಮಂಟಪದಲ್ಲಿ ಉತ್ಸವವು ಪ್ರಾರಂಭವಾಗಿ ದೇವಾಲಯದ ಒಳಪ್ರಕಾರದಲ್ಲಿ ವಿಜೃಂಭಣೆಯಿಂದ ಉತ್ವವ ನಡೆಯುತ್ತದೆ. ಸುಮಾರು 60 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಭಕ್ತಾದಿಗಳು ಶ್ರೀ ಯವರ ವೈಕುಂಠಮುಡಿ ಉತ್ವವದ ನಂತರದ ಪೂರ್ಣವಾಗಿ ಬೆಣ್ಣೆಯಿಂದ ಅಲಂಕೃತ ಶ್ರೀರಂಗನಾಥನ ದರ್ಶನ ಪಡೆದು,ವೈಕುಂಠ ದ್ವಾರದ ಮೂಲಕ ಸಾಗಿ ಶ್ರೀರಂಗನಾಥ ಸ್ವಾಮಿಯವರ ದೇವಾಲಯದ ಹೊರಪ್ರಕಾರದಲ್ಲಿರುವ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿಯವರ ದರ್ಶನ ಪಡೆಯುತ್ತಾರೆ , ಅಂದು ಮಕರ ಸಂಕ್ರಮಣದಂದು ರಾತ್ರಿ ಶ್ರೀರಂಗಪಟ್ಟಣದ ಪುರಜನರ ಸಹಾಕರದೋಂದಿಗೆ ದೇವಾಲಯದ ಮುಂಭಾಗದಲ್ಲಿ ಅತ್ಯಂತ ವೈಭವಯುತ ಅತ್ಯಂತ ರಮಣೀಯ ಲಕ್ಷ ದೀಪೋತ್ವವ ಜರುಗುತ್ತದೆ, ಶ್ರೀರಂಗನಾಥ ಸ್ವಾಮಿಯವರ ದೇವಾಲಯದ ರಾಜಗೋಪುರ ಹಾಗೂ ವಿಶಾಲವಾದ ರಸ್ತೆಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರದ ನಡುವೆ ಒಂದು ಲಕ್ಷ ದೀಪಗಳನ್ನು ಭಕ್ತಾಧಿಗಳ ಸಹಕಾರದೋಂದಿಗೆ ಹಚ್ಚಲಾಗುವುದು.ಈ ದೃಶ್ಯವು ಅದ್ಭತ , ಅತ್ಯಂತ ರಮಣೀಯ ಹಾಗೂ ಚಿರಸ್ಮರಣೀಯವಾಗಿರುತ್ತದೆ,ಲಕ್ಷ ದೀಪೋತ್ವವದ ಮಾರನೇ ದಿವಸ ಶ್ರೀರಂಗನಾಥ ಸ್ವಾಮಿಯವರ ಚಿಕ್ಕ ರಥೋತ್ವವವೂ ಜರುಗುತ್ತದೆ.

2) ರಥಸಪ್ತಮಿ ಬ್ರಹ್ಮೋತ್ಸವ

ಪ್ರತಿ ವರ್ಷ ಮಾಘ ಮಾಸದಲ್ಲಿ ಶುಕ್ಲಸಪ್ತಮಿಯಂದು ಶ್ರೀರಂಗನಾಥ ಸ್ವಾಮಿಯವರ ದೊಡ್ಡ ರಥೋತ್ಸವವು ಜರುಗುತ್ತದೆ. ಈ ಬ್ರಹ್ಮೋತ್ಸಹವದ ಅಂಗವಾಗಿ ಅಂಕುರಾರ್ಪಣ ಧ್ವಜಾರೋಹಣದಿಂದ ಪ್ರಾರಂಭವಾಗಿ ವಿವಿಧ ಉತ್ಸವಗಳು ರಾತ್ರಿ ಸಮಯದಲಿ ಶ್ರೀಯವರ ದೇವಾಲಯದಲ್ಲಿ ಜರುಗುತ್ತದೆ. ಐದನೇ ತಿರುನಾಳ್ ರಂದು ಪ್ರಹ್ಲಾದೋತ್ಸವ ಪುರಾಣಪಠಣ ನಡೆಯುತ್ತದೆ. ಆರನೇ ತಿರುನಾಳ್ ರಂದು 'ಗಜೇಂದ್ರ ಮೋಕ್ಷ' ಉತ್ಸವ ಜರುಗಲಿದೆ 7ನೇ ತಿರುನಾಳ್ ರಂದು ಬೆಳಗ್ಗೆ 6.00 ಗಂಟೆಗೆ ನಯನ ಮನೋಹರ ಸೂರ್ಯಮಂಡಲ ವಾಹನೋತ್ಸವ ಅಮ್ಮನವರಿಗೆ ಗಜಲಕ್ಷ್ಮಿ ಉತ್ಸವವೂ ಊರಿನ ಪ್ರಮುಖ ಬೀದಿಗಳಲ್ಲಿ ಉತ್ವವ ಜರಗಿಸಲಾಗುವುದು. ಆನಂತರ ಶ್ರೀರಂಗನಾಥ ಸ್ವಾಮಿಯವರ ಹಾಗೂ ಅಮ್ಮನವರ ಉತ್ಸವ ಮೂರ್ತಿಗಳನ್ನೊಳಗೊಂಡಂತೆ ಅನೇಕ ಮಂಟಪೋತ್ಸವಗಳು ಜರುಗಿ ಮದ್ಯಾಹ್ನ 1.00 ಗಂಟೆಯ ನಂತರ ಶ್ರೀ ಸ್ವಾಮಿಯವರ ರಥಾರೋಹಣ ನಡೆದು ದೇವಾಲಯದ ಒಂದು ತುತ್ತು ರಥೋತ್ಸವ ಭಾಗವಹಿಸಿ ರಥಕ್ಕೆ ಹಣ್ಣು ಜವನ ಎಸೆಯುವುದು ವಾಡಿಕೆ 9ನೇ ತಿರುನಾಳ್ ರಂದು ಅವಭಾತ ತೀರ್ಥಸ್ನಾನ ಹಾಗೂ ಧ್ವಜಾರೋಣವಾಗಿ ಈ ಬ್ರಹ್ಮೋತ್ಸವವವು ಮುಕ್ತಯವಾಗೋಳ್ಳುತ್ತದೆ.

3) ಮಾಘ ಶುದ್ದ ಪೂರ್ಣಿಮಾ :

ಶ್ರೀರಂಗಕ್ಷೇತ್ರದಲ್ಲಿ ಮಾಘಮಾಸದ ಹುಣಿಮೆಯಂದು ಕಾವೇರಿ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಅಂದು ರಾಜ್ಯದ ನಾನ ಭಾಗಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀರಂಗನಾಥನ ಕ್ಷೇತ್ರಕ್ಕೆ ಆಗಮಿಸಿ ಕಾವೇರಿ ನದಿಯಲ್ಲಿ ಸ್ನಾನಮಾಡಿ ಶ್ರೀರಂಗನಾಥ ಸ್ವಾಮಿಯವರ ದರ್ಶನ ಪಡೆಯುತ್ತಾರೆ. ಅಂದು ಶ್ರೀರಂಗನಾಥ ಸ್ವಾಮಿಯವರ ದೇವಾಲಯದ ಒಳಪ್ರಕಾರದಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿಯವರಿಗೆ ವಿಶೇಷ 'ಪುಷ್ಪಾಂಗಿ' ಸೇವೆ ಪೂಜೆಗಳು ಜರಗುತ್ತದೆ.

4) ಶ್ರೀರಂಗ ಜಯಂತಿ :

ಶ್ರೀರಂಗನಾಥ ಸ್ವಾಮಿಯವರ ದೇವಾಲಯದಲ್ಲಿ ' ಶ್ರೀರಂಗ ಜಯಂತಿ' ಉತ್ಸವವು ಅತ್ಯಂತ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ. ವೈಶಾಖ ಶುದ್ಧ ಸಪ್ತಮಿಯಂದು (ಕೆಲವು ಬಾರಿ ಚೈತ್ರ ಶುದ್ಧ ಸಪ್ತಮಿ ) ಈ ಉತ್ವವನ್ನು ಆಚರಿಸಲಾಗುತ್ತದೆ. ಶ್ರೀರಂಗ ಸ್ವಾಮಿ ಈ ಕೇತ್ರದಲ್ಲಿ ಪ್ರಕಟಗೊಂಡು ನೆಲೆನಿಂತ ಈ ದಿವಸವನ್ನು ಪ್ರತಿ ವರ್ಷ ಶ್ರೀರಂಗ ಜಯಂತಿ ಎಂದು ಆಚರಿಸಲಾಗುವುದು ಶ್ರೀರಂಗಜಯಂತಿ ಅಂಗವಾಗಿ, ಬೆಳಿಗ್ಗೆ ಶ್ರೀರಂಗನಾಥ ಸ್ವಾಮಿಯವರ ಶ್ರೀರಂಗನಾಯಕಿ ಅಮ್ಮನವರಿಗೆ ವಿಶೇಷ ಮಹಾಭಿಷೇಕ ಹಾಗೂ ರಮಣೀಯವಾದ ಅರಿಶಿಣ ಸೇವೆ ನಡೆಯುತ್ತದೆ. ಮದ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆದು ರಾತ್ರಿ 7.30 ಕ್ಕೆ ಅಮುಲ್ಯ ಹರಳುಗಳಿಂದ ಕೂಡಿದ ಸಂಪೂರ್ಣ ಚಿನ್ನದಿಂದ ತಯಾರಿಸಲ್ಪಟಿರುವ 'ಶ್ರೀರಂಗಮುಡಿ' ಕಿರೀಟವನ್ನು ಶ್ರೀರಂಗನಾಥ ಸ್ವಾಮಿಯವರ ದರಿಸಿ ಇನ್ನಿತರ ವಿಶೇಷ ಆಭರಣಗಳನ್ನು ಧರಿಸಿ ಅಲಂಕಾರ ಹಾಗೂ ವಿಶೇಷ ನಾದಸ್ವರದೊಡನೆ ಶ್ರೀರಂಗಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಬಣೆಯ ಉತ್ಸವ ಜರುಗುತ್ತದೆ.

5) ಬಂಗಾರದ ಗರುಡೋತ್ಸವ :

ವೈಶಾಖ ಮಾಸದ ಪೌರ್ಣಿಮಿಯಂದು ಶ್ರೀರಂಗನಾಥ ಸ್ವಾಮಿಯವರ ಸುಪ್ರಸಿದ್ದ ಬಂಗಾರದ ಗರುಡೋತ್ಸವ ಜರುಗುತ್ತದೆ. ಶ್ರೀಯವರ ದೇವಾಲಯದ್ಲಲಿರುವ ಎಂಟು ಅಡಿಗೆ ಹೆಚ್ಚು ಎತ್ತರವಿರುವ ಬಂಗಾರದ ರೇಖು ಲೇಖಿತ ಗರುಡ ದೇವರಿಗೆ ಹೂಗಳಿಂದ ಅಲಂಕರಸಿ ಸರ್ವಾಲಂಕಾರ ಭೂಷಿತ ಶ್ರೀರಂಗನಾಥ ಸ್ವಾಮಿ ಗರುಡ ದೇವರ ಮೇಲೆ ಬಿಜಯ ಮಾಡಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ವಿಜೃಭಣೆಯ ಉತ್ಸವ ಜರುಗುತ್ತದೆ. ಶ್ರೀಮನ್ನಾರಾಯಣನು ಶ್ರೀ ಗರುಡ ಪಕ್ಷಿಯ ಮೇಲೆ ಕುಳಿತು ಋಷಿಗಳಿಗೆ, ಭಕ್ತಾದಿಗಳಿಗೆ ದರ್ಶನ ನೀಡುವನು ಎಂಬುದೇ ಈ ಉತ್ಸವದ ಪ್ರತೀತಿ.

6) ಉಯ್ಯಾಲೋತ್ಸವ:

ಶ್ರೀರಂಗನಾಥ ಸ್ವಾಮಿಯವರ ದೇವಾಲದಲ್ಲಿ ಆಷಾಡ ಮಾಸದ ಪ್ರಥಮ ಏಕಾದಶಿಯಿಂದ ಪ್ರಾರಂಭವಾಗಿ 7 ದಿನಗಳ ಕಾಲ ಶ್ರೀರಂಗನಾಥ ಸ್ವಾಮಿಯವರ ವೈಭವದ ಉಯ್ಯಲೋತ್ಸವ ಜರಗುತ್ತದೆ , 6ನೇ ದಿವಸ ಶ್ರೀರಂಗನಾಯಕಿ ಅಮ್ಮನವರಿಗೆ ಹಾಗೂ 7ನೇ ದಿವಸದಂದು ಶ್ರೀ ಕೃಷ್ಣ ಸ್ವಾಮಿಯವರಿಗೆ ಉಯ್ಯಾಲೋತ್ಸವವು ಜರಗುತ್ತದೆ.

7) ವೇದಾಂತಾ ಚಾರ್ಯರ ತಿರುನಕ್ಷತ್ರ :

ಈ ಉತ್ಸವ ಶ್ರೀಯವರ ದೇವಾಲಯದಲ್ಲಿ ಕೆಲವು ಬಾರಿ ಭಾದ್ರಪದ ಶುದ್ದ ಶ್ರಾವಣ ನಕ್ಷತ್ರದಂದು, ಹಾಗೂ ಕೆಲವು ಬಾರಿ ಆಶ್ವಯುಜ ಮಾಸದ ಶುದ್ದ ಶ್ರಾವಣ ನಕ್ಷತ್ರದಂದು ಜರುಗಲಿದೆ . ಈ ಉತ್ವವದ ಅಂಗವಾಗಿ ಶ್ರೀರಂಗನಾಥ ಸ್ವಾಮಿಯವರ ದೇವಾಲಯದ ವೇದಾಂತ ದೇಶಿಕರ ಸನ್ನಿಧಿಯಲ್ಲಿ ಹನ್ನೊಂದು ದಿವಸಗಳ ಕಾಲ ವಿಶೇಷ ಪೂಜೆ , ಪಾರಾಯಣ , ಉತ್ಸವಗಳು ಜರುಗಲಿದೆ, ವೇದಾಂತಾಚಾರ್ಯರ ತಿರುನಕ್ಷತ್ರ ತರುವಾಯ ವೈಭವದ ಗಂಧಪುಡಿ ಉತ್ವವ ಜರುಗಲಿದೆ.

8) ನವರಾತ್ರಿ:

ಆಶ್ವಯುಜ ಮಾಸದ ಶುದ್ದ ಪಾಡ್ಯದಿಂದ ಪ್ರಾರಂಭವಾಗಿ ಸತತ ಒಂಬತ್ತು ದಿವಸಗಳವರೆಗೆ ಶ್ರೀರಂಗನಾಥ ಸ್ವಾಮಿಯವರ ದೇವಾಲಯದಲ್ಲಿ ಯಾಗ,ಹೋಮ, ವಿಶೇಷ ಪೂಜೆ ಹಾಗೂ ಉತ್ಸವಗಳು ಜರುಗಲಿದೆ ಆಯುಧ ಪೂಜೆಯಂದು ಶ್ರೀರಂಗನಾಥ ಸ್ವಾಮಿಯವರಿಗೆ ಬೆಳಿಗ್ಗೆ ಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಜರುಗುತ್ತದೆ. ವಿಜಯದಶಮಿಯಂದು ದೇವಾಲಯದ ಮುಂಭಾಗದಲ್ಲಿರುವ ಶಮೀ ವೃಕ್ಷದ ಬಳಿ ಉತ್ಸವವನ್ನು ಬಿಜಯ ಮಾಡಿಸಿ ಶಮೀ ಪೂಜೆ ನಡೆಸಲಾಗುತ್ತಿದೆ.

9) ಅಷ್ಠ ತೀರ್ಥೋತ್ಸವ:

ಶ್ರೀರಂಗಪಟ್ಟಣದ ಕಾವೇರಿ ನದಿಯ ಪಾತ್ರದಲ್ಲಿ ಒಟ್ಟು ಎಂಟು ತೀರ್ಥಗಳು ಪ್ರಸಿದ್ದವಾದುವುಗಳಾಗಿವೆ , ಅವುಗಳೆಂದರೆ

ಹೀಗೆ ಎಂಟು ಪವಿತ್ರ ತೀರ್ಥಗಳಿದ್ದು ಈ ತೀರ್ಥಗಳಲ್ಲಿ ಮಹಾ ಋಷಿಮುನಿಗಳು ಶ್ರೀರಂಗನಾಥ ಸ್ವಾಮಿಯವರವರನ್ನು ಕುರಿತು ತಪ್ಪಸನ್ನು ಆಚರಿಸಿದ ಪವಿತ್ರ ತೀರ್ಥಗಳಾಗಿದೆ .ಪ್ರತಿ ವರ್ಷ ಆಶ್ವಯುಜ ಮಾಸದ ದಶಮಿ ಹಾಗೂ ಕೆಲವು ಬಾರಿ ಕಾರ್ತಿಕ ಶುದ್ದ ದಶಮಿಯಂದು ಈ ಅಷ್ಠತೀರ್ಥೋತ್ಸವ ಜರುಗುತ್ತದೆ . ಅಂದು ಬೆಳಿಗ್ಗೆ 7,00 ಗಂಟೆಗೆ ಶ್ರೀರಂಗನಾಥ ಸ್ವಾಮಿಯವರನ್ನು ಬೆಳ್ಳಿಪಲ್ಲಕ್ಕಿಯಲ್ಲಿ ಬಿಜಯ ಮಾಡಿಸಿ ಮೇಲ್ಕಂಡ ಅಷ್ಠ ತೀರ್ಥಗಳಲ್ಲಿ ಅಭಿಷೇಕ ಮಾಡಿ ರಾತ್ರಿ ಎಂಟು ಗಂಟೆಯ ನಂತರ ಒಟ್ಟು 32 ಕಿ,ಮೀ ನಷ್ಟು ಕ್ರಮಿಸಿದ ಈ ಉತ್ಸವ ಜತೆ ಬಂದು ಅಷ್ಠ ತೀರ್ಥಗಳಲ್ಲಿ ಸ್ನಾನ ಮಾಡಿ ಶ್ರೀರಂಗನಾಥ ದರ್ಶನ ಪಡೆದು ತೆರಳುತ್ತದೆ

10) ಪುಪ್ಪ ಬೃಂದಾವನೋತ್ಸವ :

ಪ್ರತಿ ವರ್ಷ ಕಾರ್ತಿಕ ಶುದ್ದ ದ್ವಾದಶಿಯಂದು ಶ್ರೀರಂಗನಾಥ ಸ್ವಾಮಿಯವರಿಗೆ ಅತ್ಯಂತ ರಮಣೀಯ ನಯನ ಮನೋಹರವಾದ ಪುಷ್ಪ ಬೃಂದಾವನೋತ್ಸವ ಜರುಗುತ್ತದೆ. ಮರದಿಂದ ನಿರ್ಮತ 7. ಆಡಿ ಬೃಂದವನಕ್ಕೆ ಸಂಪೂರ್ಣವಾಗಿ ಸೇವಂತಿಗೆ ಹೂಗಳನ್ನು ಅಂಟಿಸಿ ವಿವಿಧ ಅಲಂಕಾರಗಳನ್ನು ಮಾಡಿದ ಬೃಂದವನದ ಮೇಲೆ ಸರ್ವಾಲಂಕಾರ ಭೂಷಿತ ಶ್ರೀರಂಗನಾಥ ಸ್ವಾಮಿಯವರ ಉತ್ಸವವನ್ನು ಬಿಜಯ ಮಾಡಿಸಿ ಪಟ್ಟಣದ ಪ್ರಮುಖವಾದ ಬೀದಿಗಳಲ್ಲಿ ಉತ್ಸವ ಜರಗುತ್ತದೆ , ಶ್ರೀಮನ್ನಾರಾಯಣನು ತನಗೆ ಅತ್ಯಂತ ಪ್ರೀತಿ ಪಾತ್ರವಾದ ತುಳಸಿ ಬೃಂದವನದಲ್ಲಿ ನೆಲೆಸಿರುತ್ತಾನೆಂದು ಈ ಉತ್ಸವದ ಪ್ರತೀತ, ಹಿಂದೆ ಮೈಸೂರು ಅರಸರ ಕಾಲದಲ್ಲಿ ಈ ಉತ್ಸವವನ್ನು ವಿಜೃಭಣೆಯಿಂದ ನೆಡೆಸಿಕೋಂಡು ಬರುತ್ತಿದ್ದುದಾಗಿ ತಿಳಿದುಬಂದಿದೆ,

11) ಜೀಯರ್ ತಿರುನಕ್ಷತ್ರ :

ಕಾರ್ತೀಕ ಶುದ್ದ ಮೂಲನಕ್ಷತ್ರದಂದು ಶ್ರೀರಂಗನಾಥ ಸ್ವಾಮಿಯವರ ದೇವಾಲಯದಲ್ಲಿ ಜೀಯರ್ ತಿರುನಕ್ಷತ್ರ ಜರುಗುತ್ತದೆ, ಒಟ್ಟು ಹನ್ನೋಂದು ದಿವಸಗಳವರೆಗೆ ವಿಶೇಷ ಪೂಜೆ, ಆನಂತರ ಶ್ರೀ ಜೀಯರ್ ರವರ ಉತ್ಸವ ಮೂರ್ತಿ ಸಹಿತ ಶ್ರೀರಂಗನಾಥ ಸ್ವಾಮಿಯವರ ಗಂಧಪುಡಿ ಉತ್ಸವ ಜರುಗುತ್ತದೆ,

12) ಕೊಠರೋತ್ಸವ :

ಮಾರ್ಗಶಿರ ಮಾಸ ಜನವರಿ 4 ರಿಂದ 13 ರವರೆಗೆ ಶ್ರೀರಂಗನಾಥ ಸ್ವಾಮಿಯವರ ದೇವಾಲಯದಲ್ಲಿ ಹತ್ತು ದಿವಸಗಳವರೆಗೆ ಪ್ರತಿ ನಿತ್ಯವ ಉತ್ಸವ ವಿವಿಧ ಅಲಂಕಾರಗಳೋಂದಿಗೆ ಶ್ರೀರಂಗನಾಥ ಸ್ವಾಮಿಯವರ ಕೊಠರೋತ್ಸವ ಜರುಗುತ್ತದೆ, ಪ್ರತಿ ನಿತ್ಯ ಉತ್ಸವ ಕಾಲದಲ್ಲಿ ವೇದ ಪಾರಾಯಣ ಮಾಡಿಸಿಕೊಂಡು ಬರುವುದು ವಿಶೇಷ ಕೊಠರೋತ್ಸವ ಸಮಯದಲ್ಲಿ ಶ್ರೀರಂಗನಾಥ ಸ್ವಾಮಿಯವರಿಗೆ ಮೊಹಿನಿ ಅಲಂಕಾರ, ವೈಂಠನಾರಯಣ ಅಲಂಕಾರ ಮೊದಲಾದ ಅಲಂಕಾರಗಳನ್ನು ಮಾಡಿ ವಿಶ್ವಕ್ಸೇನರೇ ಮದಲ್ಗೊಂಡ ಶ್ರೀ ಜಿಯರ್.ಶ್ರೀ. ದೇಶಿಕರವರ ವಿಗ್ರಹಗಳ ಉತ್ಸವವನ್ನೂ ಸಹ ಒಂದೊಂದು ದಿವಸ ಬಿಜಯ ಮಾಡಿಸುತ್ತಾರೆ,

ಈ ಮೇಲೆ ತಿಳಿಸಿದಂತೆ ಪ್ರಮುಖ ಉತ್ಸವಾದಿಗಳು ಜರುಗುತ್ತವೆಯಾದರು ಇನ್ನೂ ಅನೇಕ ಉತ್ಸವ ವಿಶೇಷ ಪೂಜಾ ಸಮಾರಂಭಗಳು ಜರುಗುತ್ತದೆ ಅವುಗಳು.

13) ಯುಗಾದಿ:

ಶ್ರೀರಂಗನಾಥ ಸ್ವಾಮಿಯವರ ಹಾಗೂ ಶ್ರೀರಂಗನಾಯಕಿ ಅಮ್ಮನವರಿಗೆ ಮಹಾಬಿಷೇಕ ಹಾಗೂ ರಾತ್ರಿ ಪಂಚಾಂಗ ಶ್ರವಣ ನೆಡೆಯುತ್ತದೆ

14) ಕೋಡೈತಿರುನಾಳ್:

ಚೈತ್ರ ಶುದ್ದ ಪಂಚಮಿಯಿಂದ 3 ದಿವಸಗಳ ಕಾಲ.

15) ಶ್ರೀ ನರಸಿಂಹ ಜಯಂತಿ :

ವೈಶಾಖ ಶುದ್ದ ಚತುರ್ದಶಿಯಂದು ಜರುಗುತ್ತದೆ .

16) ಶ್ರೀ ನವ್ನೊಳ್ವಾರ್ ತಿರುನಕ್ಷತ್ರ :

ವೈಶಾಖ ಅಥಾವ ಜೇಷ್ಠ ಮಾಸದಲ್ಲಿ ಒಟ್ಟು ಹನ್ನೊಂದು ದಿವಸಗಳವರೆಗೆ ಜರುಗುತ್ತದೆ

17) ಆಷಾಡಶುದ್ದ ಪೌರ್ಣಮಿ:

ಶ್ರೀರಂಗನಾಥ ಸ್ವಾಮಿಯವರ ದೇವಾಲಯದ ಪ್ರಾಕರದಲ್ಲಿರುವ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿಯವರಿಗೆ ಪುಪ್ಫಾಂಗಿ ಸೇವೆ ಜರಗುತ್ತದೆ.

18) ಕಾವೇರಿ ಪೂಜೆ :

ಆಷಾಡ ಮಾಸದ ಕೃಷ್ಣ ಪಕ್ಷದಲ್ಲಿ ಶ್ರೀರಂಗನಾಥ ಸ್ವಾಮಿಯವರ ಉತ್ಸವವನ್ನು ಕಾವೇರಿ ನದಿಯ ದಂಡೆಗೆ ಬಿಜಯ ಮಾಡಿಸಿ ಕಾವೇರಿ ಯ ನದಿಗೆ ವಿಶೇಷ ಪೂಜೆ ಸಲ್ಲಿಸುವ ಹಾಗೂ ಕಾವೇರಿ ಮಾತೆಗೆ ಬಾಗಿನ ಕೊಡುವ ಪದ್ದತಿ ಇರುತ್ತದೆ.

19) ಪವಿತ್ರೋತ್ಸವ:

ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಪ್ರಾರಂಭಿಸಿ ಸತತ ಐದು ದಿವಸಗಳ ಕಾಲ ಜರಗುತ್ತದೆ

20) ದೀಪಾವಳಿ :

ಶ್ರೀರಂಗನಾಥ ಸ್ವಾಮಿಯವರಿಗೆ ಹಾಗೂ ಶ್ರೀರಂಗನಾಯಕಿ ಅಮ್ಮನವರಿಗೆ ವಿಶೇಷ ಅಭಿಷೇಕ , ಅರಿಸಿನ ಸೇವೆ. ಈ ಮೇಲ್ಕಂಡಂತೆ ಉತ್ಸವಗಳೂ ಸಹ ಜರುಗುತ್ತದೆ . ಇದಲ್ಲದೆ ಭಕ್ತಾದಿಳಿಂದ ಪುದವಟ್ಟು ಸೇವೆ ಉತ್ಸವಗಳೂ ಸಹ ಜರುಗುತ್ತದೆ.

 • ಹೋಲಿ ಗೇಟ್ವೇ, ಶ್ರೀರಂಗಪಟ್ಟಣ, ಇಲ್ಲಿ ಟಿಪ್ಪು ಸುಲ್ತಾನನ್ನು ಕೊಲ್ಲಲಾಯಿತು. ಥಾಮಸ್ ಸೈಡೆನ್ಹಾಮ್ ವಿವರಣೆ, ಸಿ.೧೭೯೯

 • ಚಕಮಕಿಚಾಪು ಗನ್, ಟಿಪ್ಪು ಸುಲ್ತಾನ್ನಿಗೆ ನಿರ್ಮಿಸಲಾಗಿತ್ತು. ಟಿಪ್ಪು ಸುಲ್ತಾನ್ ಅನೇಕ ಪಾಶ್ಚಾತ್ಯ ಕುಶಲಕರ್ಮಿಗಳನ್ನು ಬಳಸುತಿದ್ದ, ಈ ಗನ್ ಆ ಕಾಲದ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಪ್ರತಿಫಲಿಸುತ್ತದೆ.

 • ೧೭೯೯ರ ಶ್ರೀರಂಗಪಟ್ಟಣ ಯುದ್ಧದಲ್ಲಿ ಟಿಪ್ಪುಸುಲ್ತಾನ್ನ ಸೇನೆ ಬಳಸುತಿದ್ದ ಬಂಡಿತೋಪು

 • ಬರ್ನಾರ್ಡ್ ಕಾರ್ನ್ವೆಲ ರವರ 'ಶಾರ್ಪೆಸ್ ಟೈಗರ್'' ಮತ್ತು ವಿಲ್ಕೀ ಕಾಲಿನ್ಸ್ ರವರ 'ದಿ ಮೂನ್ಸ್ಟೋನ್', "ಸೆರಿಂಗಪಟಂನದ ನಡುವೆ" ಎಂಬ ಪೀಠಿಕೆಯನ್ನು ಒಳಗೊಂಡಿದೆ (೧೭೯೯),"

 • Home|Sitemap|Screen Reader Access

  Screen Reader Access


  Screen Reader Website Free/Commercial
  Non Visual Desktop Access (NVDA) http://www.nvda-project.org/ (External website that opens in a new window) Free
  System Access To Go http://www.satogo.com/ (External website that opens in a new window) Free
  Hal http://www.yourdolphin.co.uk/productdetail.asp?id=5 (External website that opens in a new window) Commercial
  JAWS http://www.freedomscientific.com/jaws-hq.asp (External website that opens in a new window) Commercial
  Supernova http://www.yourdolphin.co.uk/productdetail.asp?id=1 (External website that opens in a new window) Commercial
  Window-Eyes http://www.gwmicro.com/Window-Eyes/ (External website that opens in a new window) Commercial