ಕರ್ನಾಟಕ ಸರ್ಕಾರ

ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ

ಶ್ರೀರಂಗಪಟ್ಟಣ ಕೋಟೆ

ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಹೋದಾಗ ಇಲ್ಲಿನ ಶ್ರೀರಂಗಪಟ್ಟಣದ ಕೋಟೆಯನ್ನು ನೋಡಲೇಬೇಕು. ಈ ಕೋಟೆಯನ್ನು ಇಲ್ಲಿನ ಜಾಗೀರುದಾರನಾದ ಕೆಂಪೆಗೌಡನು 1537ರಲ್ಲಿ ನಿರ್ಮಿಸಿದನು. ಈ ಕೋಟೆಯು ಕಾವೇರಿನದಿಯ ನಡುವಿನ ದ್ವೀಪದಲ್ಲಿ ಇದೆ. ಇದು ಟಿಪ್ಪು ಸುಲ್ತಾನನ ಕೋಟೆಯೆಂದು ಸಹ ಕರೆಯಲ್ಪಡುತ್ತದೆ. ಇದು ಇಂಡೋ-ಇಸ್ಲಾಮಿಕ್ ವಾಸ್ತು ಶೈಲಿಯನ್ನು ಹೊಂದಿದೆ. ಈ ಕೋಟೆಗ ನಾಲ್ಕು ದ್ವಾರಗಳಿದ್ದು, ಇವುಗಳಿಗೆ ದೆಹಲಿ,ಬೆಂಗಳೂರು, ಮೈಸೂರು ಮತ್ತು ಆನೆ (ಗಜ) ದ್ವಾರಗಳೆಂದು ಕರೆಯುತ್ತಾರೆ. ಕೋಟೆಯ ಸುರಕ್ಷತೆಯ ಸಲುವಾಗಿ ಎರಡೆರಡು ಗೋಡೆಗಳನ್ನು ನಿರ್ಮಿಸಲಾಗಿದೆ.ಕೋಟೆಯ ಪ್ರಮುಖ್ಡ ಆಕರ್ಷಣೆಯೆಂದರೆ ಇಲ್ಲಿನ ಮುಖ್ಯದ್ವಾರ, ಇಲ್ಲಿ ಈ ಕೋಟೆಯ ಸ್ಥಾಪನೆಯ ದಿನಾಂಕವನ್ನು ಪರ್ಷಿಯಾ ಭಾಷೆಯಲ್ಲಿ ಕೆತ್ತಲಾಗಿದೆ. ಇಲ್ಲಿ ಸರ್ ರಾಬರ್ಟ್ ಕೆರ್ ರವರ ಮನಮೋಹಕ ಚಿತ್ರಕಲಾ ವೈಭವವನ್ನು ನೋಡಬಹುದು. ಅವರ ಶ್ರೀರಂಗಪಟ್ಟಣದ ಉಗ್ರಸ್ವರೂಪದಂತಹ ರಚನೆಗಳನ್ನು ಇಲ್ಲಿನ ಗೋಡೆಗಳಲ್ಲಿ ಕಾಣಬಹುದು. ಅಲ್ಲದೆ ಈ ಕೋಟೆಯು ವಿಷ್ಣುವಿನ 24 ವಿವಿಧ ರೂಪಗಳ ಕೆತ್ತನೆಗಳನ್ನು ಹೊಂದಿರುವ ಚತುರ್ವಿಂಶತಿ ಸ್ತಂಭಗಳೆಂದು ಕರೆಯಲಾಗುವ ಕಂಬಗಳನ್ನು ಒಳಗೊಂಡಿದೆ. ಕೋಟೆಯ ಕೆಳಗಿನ ಕೋಣೆಗಳ ಭಾಗವು ಕಾರಾಗೃಹವನ್ನು ಹೊಂದಿದೆ. ಇದನ್ನು ಬ್ರಿಟೀಷ್ ಅಧಿಕಾರಿಗಳು ಬಳಸುತ್ತಿದ್ದರು. ಅಲ್ಲದೆ ಕೋಟೆಯ ಒಳಗೆ ಶ್ರೀರಂಗನಾಥಸ್ವಾಮಿ ದೇವಾಲಯ ಮತ್ತು ಮಸೀದಿ ಸಹಾ ಇದ್ದು ಪ್ರವಾಸಿಗರು ಅವುಗಳನು ವೀಕ್ಷಿಸಬಹುದು.

ರಂಗನತಿಟ್ಟು ಪಕ್ಷಿಧಾಮ

ರಂಗನತಿಟ್ಟು ಪಕ್ಷಿಧಾಮವು ಶ್ರೀರಂಗಪಟ್ಟಣಕ್ಕೆ ಸಮೀಪದಲ್ಲಿ ಇದ್ದು, ಕಾವೇರಿ ನದಿಯ ತೀರದಲ್ಲಿ ನೆಲೆಸಿದೆ. ಇದು ಇಲ್ಲಿನ ನೋಡಲೆಬೇಕಾದ ತಾಣಗಳಲ್ಲಿ ಒಂದಾಗಿದೆ. ಈ ಪಕ್ಷಿಧಾಮವು ಆರು ದ್ವೀಪಗಳ ಸಮೂಹವಾಗಿದ್ದು, 67 ಚ.ಕಿ.ಮೀ ನಷ್ಟು ವ್ಯಾಪಿಸಿದೆ. 1940ರಲ್ಲಿ ಈ ಸ್ಥಳವನ್ನು ಪಕ್ಷಿಧಾಮವೆಂದು ಘೋಷಿಸಲಾಯಿತು.

ಇಲ್ಲಿಗೆ ಭೇಟಿಕೊಡಲು ಜೂನ್ ನಿಂದ ಅಕ್ಟೋಬರ್ ನಡುವಿನ ಅವಧಿ ಅತ್ಯಂತ ಸೂಕ್ತವಾಗಿದೆ.ಈ ಪಕ್ಷಿಧಾಮವು ಸ್ಟಾರ್ಕ್ ಮತ್ತು ಪೆಲಿಕಾನ್ ಗಳಂತಹ ವಿದೇಶಿ ವಲಸೆ ಹಕ್ಕಿಗಳ ಆವಾಸಸ್ಥಾನವಾಗಿದೆ. ಇವುಗಳ ಜೊತೆಗೆ ಬಿಳಿ ಐಬಿಸ್, ಸ್ಪೂನ್ ಬಿಲ್ಲ್(ರಾಜ ಹಂಸ) , ಎಗ್ರೆಟ್, ಚಿಕ್ಕ ಕಾರ್ಮೊರಂಟ್, ಹಾವುಹಕ್ಕಿ ಮತ್ತು ಪಾರ್ಟ್ರಿಡ್ಜ್ ನಂತಹ ಹಕ್ಕಿಗಳು ಸಹಾ ಇಲ್ಲಿ ಕಾಣಸಿಗುತ್ತವೆ. ಪ್ರವಾಸಿಗರು ಇಲ್ಲಿನ ದ್ವೀಪಗಳಲ್ಲಿ ದೋಣಿಯಾನ ಮಾಡುವಾಗ ತೆರೆದ ಕೊಕ್ಕಿನ ಕೊಕ್ಕರೆಗಳನ್ನು( ಒಪನ್ ಬಿಲ್ಲ್ ಡ್ ಸ್ಟಾರ್ಕ್) , ಬಕ ಪಕ್ಷಿಗಳನ್ನು ( ಹೆರಾನ್), ಡಾಂಟೆಗಳನ್ನು ಅವುಗಳ ಕೂಗುವಿಕೆಯನ್ನು ಅನುಸರಿಸಿ ಗುರುತಿಸಬಹುದು.ಪ್ರವಾಸಿಗರು ಈ ಪಕ್ಷಿಧಾಮಕ್ಕೆ ಬೆಳಗ್ಗೆ 9 ರಿಂದ 6 ರವರೆಗೆ ಭೇಟಿಕೊಡಬಹುದು. ಇಲ್ಲಿನ ಪ್ರವೇಶ ಶುಲ್ಕ ಭಾರತೀಯರಿಗೆ 50ರೂಪಾಯಿ ಮತ್ತು ವಿದೇಶಿಯರಿಗೆ 300 ರೂಪಾಯಿ ಇದೆ. ಪ್ರವಾಸಿಗರು ಈ ಪಕ್ಷಿಧಾಮದಲ್ಲಿ ದೋಣಿಯಾನವನ್ನು ಸಹ ಕೈಗೊಳ್ಳಬಹುದು.ಇದಕ್ಕೆ ಶುಲ್ಕ ಭಾರತೀಯರಿಗೆ 50ರೂಪಾಯಿ ಮತ್ತು ವಿದೇಶಿಯರಿಗೆ 300 ರೂಪಾಯಿ ಹಾಗಿದೆ.

ನಿಮಿಶಾಂಭಾ ದೇವಾಲಯ

ನಿಮಿಶಾಂಭಾ ದೇವಾಲಯವು ಮೈಸೂರು ಮತ್ತು ಬೆಂಗಳೂರು ಮಾರ್ಗದ ನಡುವೆ ಕಣಾಭಹುದು .ಅದರ ಇತಿಹಾಸ, ಸಂಸ್ಕೃತಿ ಮತ್ತು ಧಾರ್ಮಿಕ ಪ್ರಾಮುಖ್ಯತೆಯಿಂದ ಪ್ರಸಿದ್ಧವಾಗಿದೆ .ಈ ಪ್ರಾಚೀನ ದೇವಸ್ಥಾನವು ದೇವಿ ನಿಮಿಶಾಂಭಾಗೆ ಸಮರ್ಪಿಸಲಾಗಿದೆ, ಈ ದೇವಿಯೂ ದೇವಿ ಪಾರ್ವತಿಯ ಅವತಾರವೆಂದು ನಂಬಲಾಗಿದೆ.

ದೇವತೆಯ ವಿಗ್ರಹದ ಮುಂದೆ ಇಡಲಾಗುವ ಒಂದು ಕಲ್ಲಿನ 'ಶ್ರೀಚಕ್ರದ' ಹಿಂದೆ ಸಂಬಂಧಿಸಿದ ಆಸಕ್ತಿದಾಯಕ ದಂತಕಥೆವಿದೆ . ಈ ಪವಿತ್ರವಾದ ಸ್ಥಳವನ್ನು ಮುಕ್ತರಾಜ ಎಂಬ ರಾಜ ತಪಸ್ಸಿಗೆ ಸಾಗುವ ಮುನ್ನ ಸ್ಥಾಪಿಸಿದರು .ಈ ಶ್ರೀಚಕ್ರವು ಸುಮಾರು 400 ವರ್ಷಗಳ ಹಿಂದೆ, ಮುಮ್ಮಡಿ ಕೃಷ್ಣರಾಜ ಒಡೆಯರ್ ರಾಜ್ಯಭಾರದ ಅವಧಿಯಲ್ಲಿ ಸ್ಥಾಪನೆಯಾಗಿದೆ ಎಂದು ಹೇಳಲಾಗುತ್ತದೆ.

ದೇವಾಲಯದ ಮುಖ್ಯ ಆಕರ್ಷಣೆಯು ದೇವಸ್ಥಾನದ ಗೋಪುರದ ಮೇಲೆ ಇರುವ ಸುಂದರವಾದ ಕೆತ್ತನೆಯು ಇದು ಕೆಲವು ಸೊಗಸಾದ ವರ್ಣಚಿತ್ರಗಳು ತೋರಿಸುತ್ತದೆ . ಗಣೇಶ, ಹನುಮಾನ್ ಮತ್ತು ದೇವತೆ ಲಕ್ಷ್ಮಿ ಮತ್ತು ಸರಸ್ವತಿನ ಸಿಮೆಂಟ್ ರಚನೆಯ ವಿವಿಧ ಮೂರ್ತಿಗಳು ಸಹ ಪ್ರವಾಸಿಗರ ಪೈಕಿ ಪ್ರಮುಖ ಸೆಳೆಯುತ್ತವೆ.

ದೊಡ್ಡ ಗೋಸಾಯಿ ಘಾಟ್

ದೊಡ್ಡ ಗೋಸಾಯಿ ಘಾಟ್ ಗುಂಬಜ್ ಸಮೀಪವಿದೆ . ಗಂಜಾಂಯ್ನೋ ಸ್ಥಳದಲ್ಲಿ ಸ್ಥಾಪಿತಗೋಂಡಿದು ಗುಂಬಜ್ ಯಿಂದ ೨ ಕಿ.ಮಿ. ದೂರದಲ್ಲಿ ಇರುವ ಒಂದು ಪ್ರವಾಸಿ ತಾಣ. ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಕೂಡ ಕಾವೇರಿ ನದಿಯ ಹತ್ತಿರದಲ್ಲಿ ಸ್ಥಾಪಿತವಾಗಿದೆ.

ತ್ರಿವೇಣಿ ಸಂಗಮವು ದೊಡ್ಡ ಗೋಸಾಯಿ ಘಾಟ್ ಯಿಂದ ೧ ಕಿ.ಮಿ. ದೂರದಲ್ಲಿದೆ .ಸಂಗಮವುಕೂಡ ಒಂದು ಪ್ರವಾಸಿ ತಾಣವಗಿದು ಹಲಾವರು ಪ್ರವಾಸಿಗಳನ್ನು ಆಕರ್ಷಿಸುತ್ತದೆ

ಕರೀಘಟ್ಟ

ಶ್ರೀರಂಗಪಟ್ಟಣಕ್ಕೆ ಭೇಟಿಕೊಡುವ ಪ್ರತಿಪ್ರವಾಸಿಗನು ಇಲ್ಲಿನ ಟಿಪ್ಪುವಿನ ಕೋಟೆ ಎಂದೆ ಹೆಸರಾದ ಗುಂಬಜ್ ಗೆ ಭೇಟಿಕೊಡಲೆಬೇಕು. 20 ಮೀಟರ್ ಎತ್ತರ ಈ ಕಟ್ಟಡವು ಟಿಪ್ಪು ಹಾಗು ಟಿಪ್ಪುವಿನ ತಂದೆ ಹೈದರಾಲಿ ಮತ್ತು ತಾಯಿಯಾದ ಫಾತಿಮಾ ಬೇಗಂರ ಸಮಾಧಿ ಹೊಂದಿರುವುದರಿಂದ ಪ್ರಸಿದ್ಧವಾಗಿದೆ. ಅಲ್ಲದೆ ಟಿಪ್ಪುವಿನ ಮಂತ್ರಿಗಳು ಮತ್ತು ಇತರ ರಾಜ ಪರಿವಾರದವರು, ಸಂಬಂಧಿಗಳನ್ನು ಇಲ್ಲಿ ಸಮಾಧಿಮಾಡಲಾಗಿದೆ.


ಸಂಗಮ

ಈ ಮನಮೋಹಕವಾದ ಗೋರಿಯು ಗ್ರಾನೈಟಿನ ಚಾವಣಿ, ಕೆತ್ತನೆಗಳಿಂದ ಕೂಡಿದ ಗೋಡೆಗಳು ಮತ್ತು ಟಿಪ್ಪು ಹಾಗು ಹೈದರಾಲಿಯರು ಮೈಸೂರನ್ನು ಆಳಿದ್ದನ್ನು ಪ್ರದರ್ಶಿಸುವ 36 ಮನೋಹರವಾದ ಗ್ರಾನೈಟ್ ಸ್ತಂಭಗಳನ್ನು ಹೊಂದಿದೆ. 220 ವರ್ಷ ಹಳೆಯದಾದ ಈ ಕೋಟೆಯು ಒಂದು ಎತ್ತರವಾದ ಜಗಲಿಯ ಮೇಲೆ ಕಟ್ಟಲ್ಪಟ್ಟಿದ್ದು, ಇಂಡೋ –ಇಸ್ಲಾಮಿಕ್ ವಾಸ್ತುಶೈಲಿಯನ್ನು ಹೊಂದಿದೆ. ಈ ಗುಂಬಾಜಿ ಬಾಗಿಲುಗಳನ್ನು ಎಬೋನಿ ಮರದಿಂದ ಮಾಡಲಾಗಿದ್ದು, ಅವುಗಳನ್ನು ದಂತದಿಂದ ಅಲಂಕರಿಸಲಾಗಿದೆ. ಇವುಗಳನ್ನು ಲಾರ್ಡ್ ಡಾಲ್ ಹೌಸಿ ನೀಡಿದನಂತೆ. ಬ್ರಿಟೀಷರು ಶ್ರೀರಂಗಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಾಗ ಇಲ್ಲಿ ಇದ್ದ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಮೂರು ಬಾಗಿಲುಗಳನ್ನು ಲಂಡನ್ ಗೆ ಸಾಗಿಸಿದರು. ಪ್ರಸ್ತುತ ಅವುಗಳನ್ನು ಲಂಡನ್ನಿನ ಆಲ್ಬಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.ಇಲ್ಲಿನ ಒಳ ಗೋಡೆಗಳಲ್ಲಿ ಹೊಂಬಣ್ಣದ ಹುಲಿಯ ಪಟ್ಟೆಗಳು ಹಾಗು ಜೊತೆಗೆ ಮೊಗಸಾಲೆಯಲ್ಲಿ ಕಪ್ಪು ಸ್ತಂಭಗಳನ್ನು ಕಾಣಬಹುದು. ಈ ಸ್ಮಾರಕದ ಆವರಣದಲ್ಲಿ ರಂಗನಾಥಸ್ವಾಮಿ ಮತ್ತು ಜುಮ ಮಸೀದಿಗಳು ಇವೆ. ಈ ಸ್ಥಳವು ಪ್ರಶಾಂತವಾದ ಉದ್ಯಾನವನ್ನೊಳಗೊಂಡಿದೆ ಇದ್ದಕ್ಕೆ ಹೊಂದಿಕೊಂಡಂತೆ ಮಸ್ಜಿದ್ –ಇ – ಅಕ್ಸ ಎಂಬ ಮಸೀದಿಯಿದೆ.


ಗುಂಬಜ್

ಶ್ರೀರಂಗಪಟ್ಟಣದಲ್ಲಿ ಜಾಮ ಮಸೀದಿಯು ಮಸ್ಜಿದ್ –ಇ – ಅಕ್ಸ ಎಂದೆ ಹೆಸರುವಾಸಿಯಾದ ನೋಡಲೇ ಬೇಕಾದ ಸ್ಥಳವಾಗಿದೆ. ಈ ಮಸೀದಿಯನ್ನು ಟಿಪ್ಪು ಸುಲ್ತಾನನು ಮೈಸೂರನ್ನು ತನ್ನ ವಶಕ್ಕೆ ಪಡೆದ ನಂತರ 1784ರಲ್ಲಿ ಕಟ್ಟಿಸಿದನು. ನಂಬಿಕೆಗಳ ಪ್ರಕಾರ ಟಿಪ್ಪು ಸುಲ್ತಾನ್ ಇಲ್ಲಿನ ಮೊದಲ ಇಮಾಮತ್ ಆಗಿ ಸ್ವತಃ ತಾನೆ ಕಾರ್ಯನಿರ್ವಹಿಸಿದನೆಂದು ಹೇಳಲಾಗುತ್ತದೆ.ಈ ಸ್ಮಾರಕವು ಟಿಪ್ಪುಸುಲ್ತಾನ ನೆಚ್ಚಿನ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತ್ತು. ಎರಡು ಅಂತಸ್ತಿನ ಈ ಮಸೀದಿಯು ಅಪರೂಪದ ಬಿಳಿಯ ಬಣ್ಣದ ಗುಮ್ಮಟವನ್ನು ಹೊಂದಿದೆ. ಜೊತೆಗೆ ಪ್ರಬಲ ಗೋಪುರಗಳನ್ನು ಹಾಗು ಎರಡು ಮಿನಾರ್ ಗಳನ್ನು ಹೊಂದಿದೆ

ಅಲ್ಲದೆ ಈ ಮಸೀದಿಯು 97 ವರ್ಷಗಳಷ್ಟು ಹಳೆಯದಾದೆಂದು ಹೇಳಲಾಗುವ ಟ್ರಿಕ್ ಟಾಕಿಂಗ್ ಗಡಿಯಾರವನ್ನು ಹೊಂದಿದೆ. ಇದು ಇಂದಿಗು ಸುಸ್ಥಿತಿಯಲ್ಲಿದ್ದು, ವೇಳೆ ತೋರಿಸುತ್ತದೆ. ಇದರ ಪಶ್ಚಿಮ ಭಾಗದಲ್ಲಿ ಒಂದು ಹಜಾರವಿದ್ದು ಇದು ಪ್ರಾರ್ಥನೆಯ ಮೊಗಸಾಲೆಯನ್ನು ಮತ್ತು ಮಸೀದಿಯ ಮಿಹ್ರಾಬನ್ನು( ಮೆಕ್ಕದ ದಿಕ್ಕು ಸೂಚಿಸುವ ತಾಣ) ಹೊಂದಿದೆ.ಮಸೀದಿಯು ಎತ್ತರವಾದ ಬುನಾದಿಯ ಮೇಲೆ ನಿರ್ಮಾಣಗೊಂಡಿದ್ದು, ಮುಂದೆ ತೆರೆದ ಅಂಗಳವಿದೆ. ಗುಮ್ಮಟಗಳನ್ನು ಅಷ್ಟಕೋನಾಕೃತಿಯ ಮಿನಾರುಗಳ ಮೇಲೆ ಸ್ಥಾಪಿಸಲಾಗಿದೆ. ಈ ಮಿನಾರುಗಳಿಗೆ ಪಾರಿವಾಳದ ಕಿಂಡಿಗಳನ್ನು ಮಾಡಲಾಗಿದೆ.

200 ಮೆಟ್ಟಿಲು ಹತ್ತಿ ಮಿನಾರಿನ ತುದಿಗೆ ಹೋದರೆ ಅಲ್ಲಿಂದ ಸುತ್ತಲ ಸುಂದರ ಪ್ರದೇಶಗಳನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು.ಇಲ್ಲಿ 50 ವರ್ಷಗಳ ಕಾಲ ಪ್ರಾರ್ಥನೆ ಸಲ್ಲಿಸಿದ ಲೇಟ್ ಅಬ್ದುಲ್ ಹಫೀಝ್ ಜುನೈದಿಯವರು ಈ ಮಸೀದಿಯ ಏಕೈಕ ಇಮಾಮ್ ಎಂದು ಹೇಳುತ್ತಾರೆ. ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ಅಲ್ಲಾನ 99 ಹೆಸರುಗಳನ್ನು ಮುದ್ರಿಸಿರುವ ಶಾಸನವೊಂದನ್ನು ನೋಡಬಹುದು. ಈ ಮಸೀದಿಯ ಆವರಣದಲ್ಲಿ ಒಂದು ಮದ್ರಸ ಎಂದು ಕರೆಯಲಾಗುವ ಧಾರ್ಮಿಕ ಶಿಕ್ಷಣ ಸಂಸ್ಥೆಯಿದೆ.


ಜಾಮ ಮಸೀದಿ