ಕರ್ನಾಟಕ ಸರ್ಕಾರ

ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ

ಸುಸ್ವಾಗತ

ಮಂಡ್ಯ ಜಿಲ್ಲೆ ,ಶ್ರೀರಂಗಪಟ್ಟಣವು ಒಂದು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯುಳ್ಳ ಪ್ರಸಿದ್ದ ಯಾತ್ರ ಸ್ದಳ ಹಾಗೂ ಪ್ರವಾಸಿಧಾಮ. ಹಿಂದೆ ಗಂಗರ, ಹೋಯ್ಸಳರ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದೆ. ಶ್ರೀರಂಗಪಟ್ಟಣವು ಮೈಸೂರು ಅರಸರ ಹಾಗು ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ರಾಜಧಾನಿಯಾಗಿ ಐತಿಹ್ಯ ನಿರ್ಮಿಸಿದೆ

ಶ್ರೀರಂಗಪಟ್ಟಣವು ಒಂದು ಮುಖ್ಯವಾದ ಪ್ರವಾಸಿಧಾಮವಾಗಿದ್ದು ಇಲ್ಲಿ ಪುರಾಣ ಪ್ರಸಿದ್ದ ಶ್ರೀರಂಗನಾಥ ಸ್ವಾಮಿಯವರ ದೇವಾಲಯವಲ್ಲದೇ ಅನೇಕ ವಿಷ್ಣು ಹಾಗೂ ಈಶ್ವರ ದೇವಾಲಯಗಳನ್ನೋಳಗೋಂಡಿದೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟ ಕೋಟೆ ಹಾಗು ಜನಾಬ್ ಹೈದರಾಲಿ ಹಾಗು ಟಿಪ್ಪು ಸುಲ್ತಾನರು ಹಾಗೂ ಅವರ ವಂಶಸ್ಧರುಗಳ ಸಮಾಧಿಗಳಿರುವ ಆಕರ್ಷಕ ಗುಂಬಜ್, ಹಾಗೂ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ (ದರಿಯಾ ದೌಲತ್ ಬಾಗ್ ) ಟಿಪ್ಪು ಸುಲ್ತಾನರ ಕಾಲದಲ್ಲಿ ಯುದ್ದ ಖೈದಿಗಳನ್ನು ಬಂದಿಸಿ ಇಡಲಾಗುತ್ತಿದ್ದ ಅನೇಕ ಡಂಜನ್ ಗಳು ಬ್ರಿಟಿಷರೋಂದಿಗೆ ಯುದ್ದ ಮಾಡುವಾಗ ಟಿಪ್ಪು ಸುಲ್ತಾನರು ಮಡಿದ ಸ್ದಳ. ಅತಿ ಎತ್ತರವಾದ ಗೋಪ್ಪುರಗಳುಳ್ಳ ಮಸೀದಿ ಇವೇ ಮೊದಲಾದ ಐತಿಹಾಸಿಕ ಸ್ಮಾರಕಗಳುಳ್ಳ ಶ್ರೀರಂಗಪಟ್ಟಣವು ಪ್ರತಿ ನಿತ್ಯ ರಾಜ್ಯ ನೆರೆರಾಜ್ಯಗಳು ಹಾಗೂ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಅಲ್ಲದೆ ಪ್ರಸಿದ್ದ ಗಂಜಾಂ ಶ್ರೀ ನಿಮಿಷಾಂಬ ದೇವಾಲಯವು ಸಹ ಅತಿ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.

ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಗೆ ಸೇರಿದ ಒಂದು ತಾಲ್ಲೂಕು ಕೇಂದ್ರವಾಗಿದ್ದು ... ಹೆಚ್ಚು ಓದಲು...