ಕರ್ನಾಟಕ ಸರ್ಕಾರ

ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ

ಮಂಡ್ಯ ಜಿಲ್ಲೆ ,ಶ್ರೀರಂಗಪಟ್ಟಣವು ಒಂದು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯುಳ್ಳ  ಪ್ರಸಿದ್ದ ಯಾತ್ರ ಸ್ದಳ ಹಾಗೂ ಪ್ರವಾಸಿಧಾಮ. ಹಿಂದೆ ಗಂಗರ, ಹೋಯ್ಸಳರ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದೆ. ಶ್ರೀರಂಗಪಟ್ಟಣವು ಮೈಸೂರು ಅರಸರ ಹಾಗೂ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ರಾಜಧಾನಿಯಾಗಿ ಐತಿಹ್ಯ ನಿರ್ಮಿಸಿದೆ.

ಶ್ರೀರಂಗಪಟ್ಟಣವು ಒಂದು ಮುಖ್ಯವಾದ ಪ್ರವಾಸಿಧಾಮವಾಗಿದ್ದು ಇಲ್ಲಿ ಪುರಾಣ ಪ್ರಸಿದ್ದ ಶ್ರೀರಂಗನಾಥ ಸ್ವಾಮಿಯವರ ದೇವಾಲಯವಲ್ಲದೇ ಅನೇಕ ವಿಷ್ಣು ಹಾಗೂ ಈಶ್ವರ ದೇವಾಲಯಗಳನ್ನೊಳಗೊಂಡಿದೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟ ಕೋಟೆ ಹಾಗೂ ಜನಾಬ್ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರು ಹಾಗೂ ಅವರ ವಂಶಸ್ಧರುಗಳ ಸಮಾಧಿಗಳಿರುವ ಆಕರ್ಷಕ ಗುಂಬಜ್, ಹಾಗೂ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ (ದರಿಯಾ ದೌಲತ್ ಬಾಗ್ ) ಟಿಪ್ಪು ಸುಲ್ತಾನರ ಕಾಲದಲ್ಲಿ ಯುದ್ದ ಖೈದಿಗಳನ್ನು ಬಂದಿಸಿ ಇಡಲಾಗುತ್ತಿದ್ದ ಅನೇಕ ಡಂಜನ್ ಗಳು ಬ್ರಿಟಿಷರೋಂದಿಗೆ ಯುದ್ದ ಮಾಡುವಾಗ ಟಿಪ್ಪು ಸುಲ್ತಾನರು ಮಡಿದ ಸ್ದಳ. ಅತಿ ಎತ್ತರವಾದ ಗೋಪ್ಪುರಗಳುಳ್ಳ ಮಸೀದಿ ಇವೇ ಮೊದಲಾದ ಐತಿಹಾಸಿಕ ಸ್ಮಾರಕಗಳುಳ್ಳ ಶ್ರೀರಂಗಪಟ್ಟಣವು ಪ್ರತಿ ನಿತ್ಯ ರಾಜ್ಯ ನೆರೆರಾಜ್ಯಗಳು ಹಾಗೂ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಅಲ್ಲದೆ ಪ್ರಸಿದ್ದ ಗಂಜಾಂ ಶ್ರೀ ನಿಮಿಷಾಂಬ ದೇವಾಲಯವು ಸಹ ಅತಿ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.


ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಗೆ ಸೇರಿದ ಒಂದು ತಾಲ್ಲೂಕು ಕೇಂದ್ರವಾಗಿದ್ದು , ಜಿಲ್ಲಾ ಕೇಂದ್ರ ಮಂಡ್ಯ ನಗರದಿಂದ 28 ಕಿ.ಮಿ. ದೂರದಲ್ಲಿ ಮೈಸೂರಿಗೆ ಹೋಗುವ ರಸ್ತೆಯಲ್ಲಿದೆ. ಪ್ರಸಿದ್ದ ಮೈಸೂರು ನಗರದಿಂದ ಶ್ರೀರಂಗಪಟ್ಟಣಕ್ಕೆ ಕೇವಲ 16 ಕಿ.ಮಿ ದೂರ ಮಾತ್ರ ಹಾಗೂ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ 125 ಕಿ.ಮೀ ದೂರದಲ್ಲಿದೆ ಶ್ರೀರಂಗಪಟ್ಟಣಕ್ಕೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗಾಗಿರು ಬರುತ್ತಿದ್ದು ಈ ಉದ್ದೇಶಕ್ಕಾಗಿ ಬೆಂಗಳೂರು ಹಾಗೂ ಮೈಸೂರು ಕೇಂದ್ರಗಳಿಂದ ಪ್ರವಾಸೋದ್ಯಮ ಇಲಾಖೆ ಪ್ರತಿನಿತ್ಯ ಅತಿಹೆಚ್ಚಿನ ಸೌಕರ್ಯವಿರುವ ಅತ್ಯಾಕರ್ಷಕ ಬಸ್ಗುಗಳನ್ನು ಪ್ರವಾಸಿಗರಿಗಾಗಿಯೆ ಮೀಸಲಿರಿಸಿದೆ. ಅಲ್ಲದೆ ಬೆಂಗಳೂರು ಮೈಸೂರು ನಗರಗಳಿಂದ ಅತ್ಯಂತ ಸುಲಲಿತವಾಗಿ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಬಸ್ ಸೌಲಭ್ಯವಿರುತ್ತದೆ. ಅಲ್ಲದೆ ಉತ್ತಮ ರೈಲ್ವೆ ಸಂಪರ್ಕವೂ ಸಹ ಇರುತ್ತದೆ.

ಶ್ರೀರಂಗಪಟ್ಟಣದ ಅತ್ಯಂತ ಆಕರ್ಷಕ ಪ್ರವಾಸಿ ಸ್ಥಳ ಹಾಗೂ ಪೌರಣಿಕ ಕೇಂದ್ರವೆಂದರೆ ಸುಪ್ರಸಿದ್ದ "ಶ್ರೀರಂಗನಾಥ ಸ್ವಾಮಿಯವರ ದೇವಾಲಯ" ಶ್ರೀರಂಗನಾಥ ಸ್ವಾಮಿಯವರ ದೇವಾಲಯವೂ ವಿಶಾಲವಾದ ಪ್ರದೇಶದಲ್ಲಿ ಬಹಳ ವಿಸ್ತಾರವಾಗಿ ಮೂರು ಹಂತ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿರುತ್ತದೆ. ಶ್ರೀರಂಗನಾಥ ಸ್ವಾಮಿಯವರ ದೇವಾಲಯ ಗರ್ಭಗುಡಿಯು ಕ್ರಿ.ಶ 894ರಲ್ಲಿ ಗಂಗರ  ಮುಖ್ಯಸ್ಥ ಶ್ರೀ ತಿರುಮಲಯ್ಯ ಎಂಬುವವರಿಂದ ನಿರ್ಮಿಸಲ್ಪಟ್ಟಿತ್ತೆಂದು ತಿಳಿಸುತ್ತದೆ. ಇತಿಹಾಸ ಆನಂತರ ವಿಜಯನಗರದ ಅರಸರ ಕಾಲದಲ್ಲಿ ನವರಂಗ ಮುಖಮಂಟಪ, ದೇವಾಲಯದ ರಾಜಗೋಪುರವು ನಿರ್ಮಾಣವಾಗಿರುವುದಾಗಿ ತಿಳಿದು ಬಂದಿದೆ ಮೂರನೇ ಹಂತ ಪಾತಾಳಂಕಣದ ಮುಂದಿನ ಭಾಗ ಜನಾಬಗ ಹೈದರಾಲಿಯವರ ಕಾಲದಲ್ಲಿ ಗರ್ಭಗುಡಿಗೆ ಸೇರಿದಂತೆ ಸುತ್ತು ಶ್ರೀ ವಿಷ್ಣುವಿನ ವಿವಿಧ ಅವತಾರದ ಸುಂದರ ವಿಗ್ರಹಗಳ ಗುಡಿಗಳಲ್ಲದೇ ರಾಮಾನುಜಾಚಾರ್ಯರು, ಶ್ರೀ ವೇದಂತ ದೇಶಿಕರು ಹಾಗೂ ಶ್ರೀ ಜೀಯರ್ ರವರ ಗುಡಿಗಳಿಲ್ಲದೆ ವಿವಿಧ ಆಳ್ವಾರರ ಗುಡಿಗಳೂ ಸಹ ಇವೆ. ಶ್ರೀರಂಗನಾಥ ಸ್ವಾಮಿಯವರ ಗರ್ಭಗುಡಿಯ ಪಕ್ಕದಲ್ಲಿ ಶ್ರೀ ಮಹಾಲಕ್ಷೀ ಅಮ್ಮನವರು ಶ್ರೀರಂಗನಾಯಕಿ ನಾಮಕಿಂತ ಪ್ರತ್ಯೇಕ ಗರ್ಭಗುಡಿಯಲ್ಲಿ ನೆಲೆಸಿರುತ್ತಾರೆ .

ಶ್ರೀರಂಗನಾಥ ಸ್ವಾಮಿಯವರ ದೇವಾಲಯವನ್ನು ಪೌರಾಣಿಕ ಹಿನ್ನೆಲೆಯಿಂದ ಗಮನಿಸಿದಾಗ ಶ್ರೀರಂಗ ಕ್ಷೇತ್ರ ಸುತ್ತಲೂ ಹರಿಯುವ ಕಾವೇರಿ ಮಾತೆಯ ಪ್ರಾರ್ಥನೆಯ ಮೇರೆಗೆ ಹಾಗೂ ಶ್ರೀ ಗೌತಮ ಮಹರ್ಷಿಗಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶ್ರೀಮಹಾ ವಿಷ್ಣುವು ಶ್ರೀರಂಗನಾಥ ನಾಮಂಕಿರಾಗಿ ಈ ಕ್ಷೇತ್ರದಲ್ಲಿ ನೆಲೆಸಿರುವುದಾಗಿ ಶ್ರೀ ವ್ಯಾಸ ಮಹರ್ಷಿ ಪ್ರಣೀತ ಶ್ರೀ ಬ್ರಹ್ಮಾಂಡ ಪುರಣಾದಲ್ಲಿ ಉಕ್ತವಾಗಿದೆ . ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟ ಮೂರು ರಂಗ ಕ್ಷೇತ್ರಗಳಲ್ಲಿ ಆದಿರಂಗ ನಾಗಿಯೂ , ಶ್ರೀಮತ್ ಪಶ್ಚಿಮ ರಂಗನಾಥನಾಗಿಯೂ . ಗೌತಮ ಕ್ಷೇತ್ರವೆಂದೂ ಸಹ ಕ್ಷೇತ್ರವನ್ನು ಕರೆಯುತ್ತಾರೆ.

ಶ್ರೀರಂಗನಾಥ ಸ್ವಾಮಿಯವರ ದೇವಾಲಯದಲ್ಲಿ ಪ್ರತಿ ಮಾಹಿತಿಯಲ್ಲೂ ಸಹ ವಿವಿಧ ಉತ್ಸವಗಳು , ವಿಶೇಷ ಪೂಜೆಗಳು ನಡೆಯುತ್ತವೆಯಾದರೂ ಈ ಕೆಳಕಂಡಂತೆ ತಿಳಿಸಿರುವ ಉತ್ಸವ ಹಾಗೂ ವಿಶೇಷ ಪೂಜೆಗಳೂ ಮಹತ್ವ ಪಡೆದು ಜನರನ್ನು ಆಕರ್ಷಿಸುತ್ತಿದೆ,

ಶ್ರೀರಂಗನಾಥಸ್ವಾಮಿಯವರ ದೇವಾಲಯವನ್ನು ಪ್ರತಿನಿತ್ಯ ಬೆಳಿಗ್ಗೆ 7,30 ಗಂಟೆಗೆ ಶ್ರೀ ಸ್ವಾಮಿಯವರೆಗೆ ಸುಪ್ರಭಾತ ಸೇವೆಯ ನಂತರ ಭಕ್ತಾದಿಗಳ ದರ್ಶನಕ್ಕೆ ತೆರೆಯಲಾಗುವುದು . ಆನಂತರ ಬೆಳಿಗ್ಗೆ 8.30 ರಿಂದ 9.30 ವರಗೆ ಶ್ರೀರಂಗನಾಥಸ್ವಾಮಿ ಹಾಗೂ ಶ್ರೀರಂಗನಾಯಕಿ ಅಮ್ಮನವರಿಗೆ ಆರಾಧನೆ ಮತ್ತು ಶಾತ್ತು ಮುರೈ ಪೂಜೆನಂತರ ಭಕ್ತಾದಿಗಳಿಗೆ ದರ್ಶನಕ್ಕೆ ಮಧ್ಯಾಹ್ನ 1,30 ಗಂಟೆಯವರೆವಿಗೂ ತೆರದಿಡಲಾಗುವುಗುವುದು ಪುನಃ ಸಾಯಂಕಾಲ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಶ್ರೀಯವರ ದೇವಾಲಯದ ಬಾಗಿಲನ್ನು ತೆರೆಯಲಾಗುವುದು , ಸಾಯಂಕಾಲ 7 ಗಂಟೆಯಿಂದ 8 ಗಂಟೆವರೆಗೆ ಆರಾಧನೆ ಹಾಗೂ ಶಾತ್ತುಮುರೈ ಪಾರಾಯಣಾದಿ ಸೇವೆಗಳು ಜರಗುತ್ತದೆ.

  • ಹೋಲಿ ಗೇಟ್ವೇ, ಶ್ರೀರಂಗಪಟ್ಟಣ, ಇಲ್ಲಿ ಟಿಪ್ಪು ಸುಲ್ತಾನನ್ನು ಕೊಲ್ಲಲಾಯಿತು. ಥಾಮಸ್ ಸೈಡೆನ್ಹಾಮ್ ವಿವರಣೆ, ಸಿ.೧೭೯೯೯

  • ಚಕಮಕಿಚಾಪು ಗನ್, ಟಿಪ್ಪು ಸುಲ್ತಾನ್ನಿಗೆ ನಿರ್ಮಿಸಲಾಗಿತ್ತು. ಟಿಪ್ಪು ಸುಲ್ತಾನ್ ಅನೇಕ ಪಾಶ್ಚಾತ್ಯ ಕುಶಲಕರ್ಮಿಗಳನ್ನು ಬಳಸುತಿದ್ದ, ಈ ಗನ್ ಆ ಕಾಲದ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಪ್ರತಿಫಲಿಸುತ್ತದೆ.

  • ೧೭೯೯ರ ಶ್ರೀರಂಗಪಟ್ಟಣ ಯುದ್ಧದಲ್ಲಿ ಟಿಪ್ಪುಸುಲ್ತಾನ್ನ ಸೇನೆ ಬಳಸುತಿದ್ದ ಬಂಡಿತೋಪು

  • ಬರ್ನಾರ್ಡ್ ಕಾರ್ನ್ವೆಲ ರವರ 'ಶಾರ್ಪೆಸ್ ಟೈಗರ್'' ಮತ್ತು ವಿಲ್ಕೀ ಕಾಲಿನ್ಸ್ ರವರ 'ದಿ ಮೂನ್ಸ್ಟೋನ್', "ಸೆರಿಂಗಪಟಂನದ ನಡುವೆ" ಎಂಬ ಪೀಠಿಕೆಯನ್ನು ಒಳಗೊಂಡಿದೆ (೧೭೯೯),"